ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದಾಗಲೂ, ಮಾಜಿ ಸಿಎಂ ಸಿದ್ದರಾಮಯ್ಯನವರ ಈ ನಡೆಯನ್ನು ತುಂಬಾ ಜನ ಗಮನಿಸಿರಲಿಕ್ಕಿಲ್ಲ. ರಾಜ್ಯ ರಾಜಕಾರಣದಲ್ಲಿ ಸೀನಿಯರ್ ಆಗಿದ್ದರೂ, ಸಿದ್ದರಾಮಯ್ಯ ಸದನದಲ್ಲಿ ಲಾಸ್ಟ್ ಬೆಂಚ್ ನಲ್ಲಿ ಕೂರುತ್ತಿದ್ದರು. ಇದಕ್ಕೆ ಕಾರಣ, ಒಂದೋ ಸಿಎಂ ಆಗಿ, ಇಲ್ಲವೋ ವಿರೋಧ ಪಕ್ಷದ ನಾಯಕನಾದರೆ ಮಾತ್ರ ಮೊದಲ ಸಾಲಿನಲ್ಲಿ ಕೂರುವುದು ಎನ್ನುವ ಸಿದ್ದರಾಮಯ್ಯನವರ ಹಠ, ಅದರಲ್ಲಿ ಅವರು ಗೆದ್ದಿದ್ದಾರೆ. ಎಲ್ಲಾ ಅಡೆತಡೆಗೋಡೆಗಳನ್ನು ಮೀರಿ, ತಮ್ಮವರ ಮುಂದೆಯೇ ತೊಡೆ ತಟ್ಟಿದ್ದಾರೆ.
AICC Interim President Sonia Gandhi Elected Siddaramaiah As Karnataka Assembly Opposition Leader: These May Be The Six Reasons